< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 28 >

1 ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.
Och David församlade till Jerusalem alla Israels öfverstar, nämliga Förstarna för slägterna, Förstarna för skiften, som på Konungen vaktade; Förstarna öfver tusende, och öfver hundrade; Förstarna öfver Konungens och hans söners ägodelar och boskap; med kamererare, krigsmän och alla mägtiga män.
2 ಅವರು ಸೇರಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನೆಂದರೆ, “ನನ್ನ ಸಹೋದರರೇ, ನನ್ನ ಪ್ರಜೆಗಳೇ, ನನ್ನ ಮಾತನ್ನು ಕೇಳಿರಿ, ಯೆಹೋವನ ಒಡಂಬಡಿಕೆಯ ಮಂಜೂಷಕ್ಕೋಸ್ಕರ ನಮ್ಮ ದೇವರ ಪಾದಪೀಠಕ್ಕೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.
Och Konung David stod upp på sina fötter, och sade: Hörer härtill, mine bröder, och mitt folk: Jag hafver tagit mig före att bygga ett hus, der Herrans förbunds ark uti hvilas skulle, och en fotapall till vår Guds fötter, och hade redt mig till att bygga;
3 ಆಗ ದೇವರು ನನಗೆ, ‘ನೀನು ಮಹಾಯುದ್ಧಗಳನ್ನು ಮಾಡಿ ಬಹಳ ರಕ್ತವನ್ನು ಸುರಿಸಿದವನು, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬಾರದು’ ಎಂದು ಹೇಳಿದನು.
Men Gud lät säga mig: Du skall icke bygga mino Namne hus; förty du äst en krigsman, och hafver blod utgjutit.
4 ಇಸ್ರಾಯೇಲರ ದೇವರಾದ ಯೆಹೋವನು ತನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಾಯೇಲರ ಅರಸನಾಗುವುದಕ್ಕೆ ಆರಿಸಿಕೊಂಡನು. ಆತನು ಯೆಹೂದ ಕುಲವು ರಾಜಕುಲವಾಗಬೇಕೆಂದು ನೇಮಿಸಿ, ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡನು. ನನ್ನ ತಂದೆಯ ಎಲ್ಲಾ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದನು.
Nu hafver Herren Israels Gud utvalt mig utu hela mins faders hus, att jag skulle vara Konung öfver Israel till evig tid; ty han hafver utvalt Juda till ett Förstadöme; och i Juda huse, mins faders hus, och ibland mins faders barn hafver han haft ynnest till mig, så att han gjorde mig till Konung öfver hela Israel;
5 ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗನಾದ ಸೊಲೊಮೋನನನ್ನು ಯೆಹೋವನ ರಾಜ್ಯ ಸಿಂಹಾಸನವಾಗಿರುವ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೋಸ್ಕರ ಆರಿಸಿಕೊಂಡನು.
Och ibland alla, mina söner (ty Herren hafver gifvit mig många söner) hafver han utvalt min son Salomo, att han sitta skall på Herrans rikes stol öfver Israel;
6 ಆತನು ನನಗೆ, ‘ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು.
Och hafver sagt till mig: Din son Salomo skall bygga mitt hus och gårdar; ty jag hafver utvalt mig honom till son, och jag skall vara hans fäder;
7 ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಕೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು ಎಂದು ಹೇಳಿದ್ದಾನೆ.’
Och skall stadfästa hans rike i evig tid, om han håller uppå att göra efter min bud och rätter, såsom i denna dag tillgår.
8 ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು.
Nu inför hela Israel Herrans menighet, och för vår Guds öron, så håller och söker all Herrans edars Guds bud; på det I mågen besitta detta goda landet, och ärfva det till edor barn efter eder, till evig tid.
9 ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.
Och du, min son Salomo, känn dins faders Gud, och tjena honom af allt hjerta, och af en välviljog själ; ty Herren ransakar all hjerta, och förstår alla tankars uppsåt. Om du söker honom, så finner du honom; om du öfvergifver honom, så förkastar han dig till evig tid.
10 ೧೦ ಆದುದರಿಂದ ಎಚ್ಚರಿಕೆಯಿಂದಿರು, ಯೆಹೋವನು ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾನೆ. ಧೈರ್ಯದಿಂದ ಕೆಲಸ ಮಾಡು” ಎಂಬುದೇ.
Så se nu till, ty Herren hafver utvalt dig, att du skall bygga honom ett hus till helgedom. Var tröst, och gör så.
11 ೧೧ ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು.
Och David gaf sinom son Salomo en eftersyn till förhuset, och till sitt hus, och till maken, och till salen, och till kamrar innantill, och till nådastolens hus;
12 ೧೨ ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ,
Dertill en eftersyn till allt det i hans sinne var, nämliga till gården åt Herrans hus, och till all maken omkring, till håfvorna i Guds hus, och de, helgada tings håfvor;
13 ೧೩ ಯಾಜಕರ ಮತ್ತು ಲೇವಿಯರ ವರ್ಗಗಳು, ಯೆಹೋವನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ, ಆರಾಧನೆಯ ಎಲ್ಲಾ ಸಾಮಗ್ರಿಗಳು
Till Presternas och Leviternas skifte, och till alla sysslor i ämbeten uti Herrans hus, och till alla tjenstenes käril i Herrans hus.
14 ೧೪ ಇವುಗಳ ವಿಷಯವಾಗಿ ಪವಿತ್ರಾತ್ಮನು ತನ್ನ ಮನಸ್ಸಿನಲ್ಲಿ ಕೊಟ್ಟಿದ್ದ ಯೋಜನೆಗಳನ್ನು ವಿವರಿಸಿದನು.
Guld efter gulds vigt, till allahanda tyg i hvart ämbetet, och allahanda silftyg, efter vigt, till allahanda redskap i hvart ämbetet;
15 ೧೫ ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,
Och vigt till gyldene ljusastakar och gyldene lampor, hvarjom ljusastaka och hans lampor sina vigt; sammalunda ock till silfljusastakar gaf han vigt, till ljusastaka och hans lampor, efter hvars ljusastakans ämbete.
16 ೧೬ ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
Gaf han desslikes guld till skådobrödsborden, till hvart bordet sina vigt; sammalunda ock silfver till silfborden;
17 ೧೭ ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ,
Och klart guld till gafflar, backen och kannor; och till gyldene skålar, hvar skål sina vigt; och till silfskålar, hvar skål sina vigt;
18 ೧೮ ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
Och till rökaltaret sina vigt, det aldraklaresta guld; och en eftersyn till vagnen för de gyldene Cherubim, så att de uträckte sig, och öfvertäckte Herrans förbunds ark.
19 ೧೯ ಆ ನಕ್ಷೆಯಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ವಿವರವಾದ ಜ್ಞಾನವು ತನಗೆ ಯೆಹೋವನು ಸೂಚಿಸಿದಂತೆ ಪ್ರಾಪ್ತವಾಯಿತೆಂದು ಹೇಳಿದನು.
Alltsammans, sade han, är mig gifvet, beskrifvet af Herrans hand, som mig underviste all eftersynenes verk.
20 ೨೦ ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ.
Och David sade till sin son Salomo: Var tröst och frimodig, och gör så; frukta dig intet, och var icke förskräckt; Herren Gud, min Gud, skall vara med dig, och skall icke draga sina hand ifrå dig, eller förlåta dig, allt intill du all verk till ämbeten i Herrans hus fullkomnat hafver.
21 ೨೧ ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನು ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸು ಉಳ್ಳವರು ನಿನ್ನ ಹತ್ತಿರ ಬೆಂಬಲವಾಗಿ ಇರುತ್ತಾರೆ. ಅಧಿಪತಿಗಳೂ, ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು” ಎಂದು ಹೇಳಿದನು.
Si, Presternas och Leviternas ordning till all ämbeten i Guds hus, äro med dig i all ärende, och äro viljoge och förståndige till all ämbeten; dertill Förstarna och allt folket i alla dina handlingar.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 28 >