< ಪೇತ್ರನು ಬರೆದ ಮೊದಲನೆಯ ಪತ್ರಿಕೆ 4 >

1 ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.
അസ്മാകം വിനിമയേന ഖ്രീഷ്ടഃ ശരീരസമ്ബന്ധേ ദണ്ഡം ഭുക്തവാൻ അതോ ഹേതോഃ ശരീരസമ്ബന്ധേ യോ ദണ്ഡം ഭുക്തവാൻ സ പാപാത് മുക്ത
2 ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು.
ഇതിഭാവേന യൂയമപി സുസജ്ജീഭൂയ ദേഹവാസസ്യാവശിഷ്ടം സമയം പുനർമാനവാനാമ് ഇച്ഛാസാധനാർഥം നഹി കിന്ത്വീശ്വരസ്യേച്ഛാസാധനാർഥം യാപയത|
3 ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.
ആയുഷോ യഃ സമയോ വ്യതീതസ്തസ്മിൻ യുഷ്മാഭി ര്യദ് ദേവപൂജകാനാമ് ഇച്ഛാസാധനം കാമകുത്സിതാഭിലാഷമദ്യപാനരങ്ഗരസമത്തതാഘൃണാർഹദേവപൂജാചരണഞ്ചാകാരി തേന ബാഹുല്യം|
4 ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
യൂയം തൈഃ സഹ തസ്മിൻ സർവ്വനാശപങ്കേ മജ്ജിതും ന ധാവഥ, ഇത്യനേനാശ്ചര്യ്യം വിജ്ഞായ തേ യുഷ്മാൻ നിന്ദന്തി|
5 ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.
കിന്തു യോ ജീവതാം മൃതാനാഞ്ച വിചാരം കർത്തുമ് ഉദ്യതോഽസ്തി തസ്മൈ തൈരുത്തരം ദായിഷ്യതേ|
6 ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
യതോ ഹേതോ ര്യേ മൃതാസ്തേഷാം യത് മാനവോദ്ദേശ്യഃ ശാരീരികവിചാരഃ കിന്ത്വീശ്വരോദ്ദേശ്യമ് ആത്മികജീവനം ഭവത് തദർഥം തേഷാമപി സന്നിധൗ സുസമാചാരഃ പ്രകാശിതോഽഭവത്|
7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.
സർവ്വേഷാമ് അന്തിമകാല ഉപസ്ഥിതസ്തസ്മാദ് യൂയം സുബുദ്ധയഃ പ്രാർഥനാർഥം ജാഗ്രതശ്ച ഭവത|
8 ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
വിശേഷതഃ പരസ്പരം ഗാഢം പ്രേമ കുരുത, യതഃ, പാപാനാമപി ബാഹുല്യം പ്രേമ്നൈവാച്ഛാദയിഷ്യതേ|
9 ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
കാതരോക്തിം വിനാ പരസ്പരമ് ആതിഥ്യം കൃരുത|
10 ೧೦ ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.
യേന യോ വരോ ലബ്ധസ്തേനൈവ സ പരമ് ഉപകരോതൃ, ഇത്ഥം യൂയമ് ഈശ്വരസ്യ ബഹുവിധപ്രസാദസ്യോത്തമാ ഭാണ്ഡാഗാരാധിപാ ഭവത|
11 ೧೧ ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್. (aiōn g165)
യോ വാക്യം കഥയതി സ ഈശ്വരസ്യ വാക്യമിവ കഥയതു യശ്ച പരമ് ഉപകരോതി സ ഈശ്വരദത്തസാമർഥ്യാദിവോപകരോതു| സർവ്വവിഷയേ യീശുഖ്രീഷ്ടേനേശ്വരസ്യ ഗൗരവം പ്രകാശ്യതാം തസ്യൈവ ഗൗരവം പരാക്രമശ്ച സർവ്വദാ ഭൂയാത്| ആമേന| (aiōn g165)
12 ೧೨ ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.
ഹേ പ്രിയതമാഃ, യുഷ്മാകം പരീക്ഷാർഥം യസ്താപോ യുഷ്മാസു വർത്തതേ തമ് അസമ്ഭവഘടിതം മത്വാ നാശ്ചര്യ്യം ജാനീത,
13 ೧೩ ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ
കിന്തു ഖ്രീഷ്ടേന ക്ലേശാനാം സഹഭാഗിത്വാദ് ആനന്ദത തേന തസ്യ പ്രതാപപ്രകാശേഽപ്യാനനന്ദേന പ്രഫുല്ലാ ഭവിഷ്യഥ|
14 ೧೪ ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.
യദി ഖ്രീഷ്ടസ്യ നാമഹേതുനാ യുഷ്മാകം നിന്ദാ ഭവതി തർഹി യൂയം ധന്യാ യതോ ഗൗരവദായക ഈശ്വരസ്യാത്മാ യുഷ്മാസ്വധിതിഷ്ഠതി തേഷാം മധ്യേ സ നിന്ദ്യതേ കിന്തു യുഷ്മന്മധ്യേ പ്രശംസ്യതേ|
15 ೧೫ ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.
കിന്തു യുഷ്മാകം കോഽപി ഹന്താ വാ ചൈരോ വാ ദുഷ്കർമ്മകൃദ് വാ പരാധികാരചർച്ചക ഇവ ദണ്ഡം ന ഭുങ്ക്താം|
16 ೧೬ ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
യദി ച ഖ്രീഷ്ടീയാന ഇവ ദണ്ഡം ഭുങ്ക്തേ തർഹി സ ന ലജ്ജമാനസ്തത്കാരണാദ് ഈശ്വരം പ്രശംസതു|
17 ೧೭ ನ್ಯಾಯವಿಚಾರಣೆಯ ಸಮಯ ಬಂದಿದೆ. ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?
യതോ വിചാരസ്യാരമ്ഭസമയേ ഈശ്വരസ്യ മന്ദിരേ യുജ്യതേ യദി ചാസ്മത്സ്വാരഭതേ തർഹീശ്വരീയസുസംവാദാഗ്രാഹിണാം ശേഷദശാ കാ ഭവിഷ്യതി?
18 ೧೮ ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?
ധാർമ്മികേനാപി ചേത് ത്രാണമ് അതികൃച്ഛ്രേണ ഗമ്യതേ| തർഹ്യധാർമ്മികപാപിഭ്യാമ് ആശ്രയഃ കുത്ര ലപ്സ്യതേ|
19 ೧೯ ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.
അത ഈശ്വരേച്ഛാതോ യേ ദുഃഖം ഭുഞ്ജതേ തേ സദാചാരേണ സ്വാത്മാനോ വിശ്വാസ്യസ്രഷ്ടുരീശ്വസ്യ കരാഭ്യാം നിദധതാം|

< ಪೇತ್ರನು ಬರೆದ ಮೊದಲನೆಯ ಪತ್ರಿಕೆ 4 >