< ಯೋಬನು 17 >

1 “ನನ್ನ ಉಸಿರು ಕಟ್ಟುತ್ತಿದೆ, ನನ್ನ ಆಯಷ್ಕಾಲವು ಮುಗಿದಿವೆ, ಗೋರಿಯು ನನಗಾಗಿ ಕಾದಿದೆ.
Дыхание мое ослабело; дни мои угасают; гробы предо мною.
2 ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ, ಅವರ ಕೆಣಕಾಟವು ಯಾವಾಗಲೂ ನನ್ನ ಕಣ್ಣಿನ ಮುಂದೆ ಇದೆ.
Если бы не насмешки их, то и среди споров их око мое пребывало бы спокойно.
3 ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು, ನನ್ನ ಕೈ ಮೇಲೆ ಕೈ ಹಾಕತಕ್ಕವರು ನನಗೆ ಇನ್ನಾರೂ ಇಲ್ಲ.
Заступись, поручись Сам за меня пред Собою! иначе кто поручится за меня?
4 ವಿವೇಕವು ಪ್ರವೇಶಿಸದಂತೆ; ಅವರ ಮನಸ್ಸನ್ನು, ಹೃದಯವನ್ನು ಮುಚ್ಚಿರುವೆ, ಹೀಗೆ ಅವರು ಜಯಶೀಲರಾಗದಂತೆ ತಡೆಯುವೆ.
Ибо Ты закрыл сердце их от разумения, и потому не дашь восторжествовать им.
5 ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ, ಅವನ ಮಕ್ಕಳು ಕಂಗೆಡುವರು.
Кто обрекает друзей своих в добычу, у детей того глаза истают.
6 ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ, ಜನರ ಉಗುಳಿಗೆ ನನ್ನ ಮುಖ ಗುರಿಯಾಗಿದೆ.
Он поставил меня притчею для народа и посмешищем для него.
7 ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ, ನನ್ನ ಅಂಗಗಳೆಲ್ಲಾ ನೆರಳಿನಂತೆ ನಿಸ್ಸಾರವಾಗಿವೆ.
Помутилось от горести око мое, и все члены мои, как тень.
8 ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ, ಮತ್ತು ನಿರಪರಾಧಿಯು ಭ್ರಷ್ಟನ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
Изумятся о сем праведные, и невинный вознегодует на лицемера.
9 ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು, ಶುದ್ಧಹಸ್ತನು ಬಲಗೊಳ್ಳುತ್ತಲೇ ಇರುವನು.
Но праведник будет крепко держаться пути своего, и чистый руками будет больше и больше утверждаться.
10 ೧೦ ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ, ನಿಮ್ಮಲ್ಲಿ ಒಬ್ಬ ಜ್ಞಾನಿಯನ್ನಾದರೂ ಕಾಣೆನು.
Выступайте, все вы, и подойдите; не найду я мудрого между вами.
11 ೧೧ ನನ್ನ ದಿನಗಳು ಮುಗಿದುಹೋದವು. ನನ್ನ ಉದ್ದೇಶಗಳೂ, ನನ್ನ ಹೃದಯದ ಆಶೆಗಳೂ ಭಂಗವಾದವು.
Дни мои прошли; думы мои - достояние сердца моего - разбиты.
12 ೧೨ ಇವರು ಇರುಳನ್ನು ಹಗಲೆಂದು ಸಾಧಿಸಿ, ಕತ್ತಲಿಂದ ಬೆಳಕು ಬೇಗನೆ ಬರುವುದೆಂದು ತಿಳಿಸುತ್ತಾರೆ.
А они ночь хотят превратить в день, свет приблизить к лицу тьмы.
13 ೧೩ ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ, ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ. (Sheol h7585)
Если бы я и ожидать стал, то преисподняя - дом мой; во тьме постелю я постель мою; (Sheol h7585)
14 ೧೪ ಸಮಾಧಿಯನ್ನು, ‘ನೀನು, ನನ್ನ ತಂದೆ’ ಎಂದೂ ಹುಳವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,
гробу скажу: ты отец мой, червю: ты мать моя и сестра моя.
15 ೧೫ ನನ್ನ ನಿರೀಕ್ಷೆ ಎಂಥದು? ನನ್ನ ನಿರೀಕ್ಷೆಯನ್ನು ಯಾರು ನೋಡುವರು?
Где же после этого надежда моя? и ожидаемое мною кто увидит?
16 ೧೬ ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ? ನಾವು ಜೊತೆಯಾಗಿ ಧೂಳಿಗೆ ಸೇರಲು ಸಾಧ್ಯವೇ?” (Sheol h7585)
В преисподнюю сойдет она и будет покоиться со мною в прахе. (Sheol h7585)

< ಯೋಬನು 17 >