< ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ 3 >

1 ಕಡೆಯದಾಗಿ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು.
ಹೇ ಭ್ರಾತರಃ, ಶೇಷೇ ವದಾಮಿ ಯೂಯಂ ಪ್ರಭಾವಾನನ್ದತ| ಪುನಃ ಪುನರೇಕಸ್ಯ ವಚೋ ಲೇಖನಂ ಮಮ ಕ್ಲೇಶದಂ ನಹಿ ಯುಷ್ಮದರ್ಥಞ್ಚ ಭ್ರಮನಾಶಕಂ ಭವತಿ|
2 ಆ ನಾಯಿಗಳಿಗೆ ಎಚ್ಚರವಾಗಿರಿ, ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ.
ಯೂಯಂ ಕುಕ್ಕುರೇಭ್ಯಃ ಸಾವಧಾನಾ ಭವತ ದುಷ್ಕರ್ಮ್ಮಕಾರಿಭ್ಯಃ ಸಾವಧಾನಾ ಭವತ ಛಿನ್ನಮೂಲೇಭ್ಯೋ ಲೋಕೇಭ್ಯಶ್ಚ ಸಾವಧಾನಾ ಭವತ|
3 ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ.
ವಯಮೇವ ಛಿನ್ನತ್ವಚೋ ಲೋಕಾ ಯತೋ ವಯಮ್ ಆತ್ಮನೇಶ್ವರಂ ಸೇವಾಮಹೇ ಖ್ರೀಷ್ಟೇನ ಯೀಶುನಾ ಶ್ಲಾಘಾಮಹೇ ಶರೀರೇಣ ಚ ಪ್ರಗಲ್ಭತಾಂ ನ ಕುರ್ವ್ವಾಮಹೇ|
4 ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
ಕಿನ್ತು ಶರೀರೇ ಮಮ ಪ್ರಗಲ್ಭತಾಯಾಃ ಕಾರಣಂ ವಿದ್ಯತೇ, ಕಶ್ಚಿದ್ ಯದಿ ಶರೀರೇಣ ಪ್ರಗಲ್ಭತಾಂ ಚಿಕೀರ್ಷತಿ ತರ್ಹಿ ತಸ್ಮಾದ್ ಅಪಿ ಮಮ ಪ್ರಗಲ್ಭತಾಯಾ ಗುರುತರಂ ಕಾರಣಂ ವಿದ್ಯತೇ|
5 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ ನಾನು ಫರಿಸಾಯನು,
ಯತೋಽಹಮ್ ಅಷ್ಟಮದಿವಸೇ ತ್ವಕ್ಛೇದಪ್ರಾಪ್ತ ಇಸ್ರಾಯೇಲ್ವಂಶೀಯೋ ಬಿನ್ಯಾಮೀನಗೋಷ್ಠೀಯ ಇಬ್ರಿಕುಲಜಾತ ಇಬ್ರಿಯೋ ವ್ಯವಸ್ಥಾಚರಣೇ ಫಿರೂಶೀ
6 ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.
ಧರ್ಮ್ಮೋತ್ಸಾಹಕಾರಣಾತ್ ಸಮಿತೇರುಪದ್ರವಕಾರೀ ವ್ಯವಸ್ಥಾತೋ ಲಭ್ಯೇ ಪುಣ್ಯೇ ಚಾನಿನ್ದನೀಯಃ|
7 ಆದರೆ, ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.
ಕಿನ್ತು ಮಮ ಯದ್ಯತ್ ಲಭ್ಯಮ್ ಆಸೀತ್ ತತ್ ಸರ್ವ್ವಮ್ ಅಹಂ ಖ್ರೀಷ್ಟಸ್ಯಾನುರೋಧಾತ್ ಕ್ಷತಿಮ್ ಅಮನ್ಯೇ|
8 ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.
ಕಿಞ್ಚಾಧುನಾಪ್ಯಹಂ ಮತ್ಪ್ರಭೋಃ ಖ್ರೀಷ್ಟಸ್ಯ ಯೀಶೋ ರ್ಜ್ಞಾನಸ್ಯೋತ್ಕೃಷ್ಟತಾಂ ಬುದ್ಧ್ವಾ ತತ್ ಸರ್ವ್ವಂ ಕ್ಷತಿಂ ಮನ್ಯೇ|
9 ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ.
ಯತೋ ಹೇತೋರಹಂ ಯತ್ ಖ್ರೀಷ್ಟಂ ಲಭೇಯ ವ್ಯವಸ್ಥಾತೋ ಜಾತಂ ಸ್ವಕೀಯಪುಣ್ಯಞ್ಚ ನ ಧಾರಯನ್ ಕಿನ್ತು ಖ್ರೀಷ್ಟೇ ವಿಶ್ವಸನಾತ್ ಲಭ್ಯಂ ಯತ್ ಪುಣ್ಯಮ್ ಈಶ್ವರೇಣ ವಿಶ್ವಾಸಂ ದೃಷ್ಟ್ವಾ ದೀಯತೇ ತದೇವ ಧಾರಯನ್ ಯತ್ ಖ್ರೀಷ್ಟೇ ವಿದ್ಯೇಯ ತದರ್ಥಂ ತಸ್ಯಾನುರೋಧಾತ್ ಸರ್ವ್ವೇಷಾಂ ಕ್ಷತಿಂ ಸ್ವೀಕೃತ್ಯ ತಾನಿ ಸರ್ವ್ವಾಣ್ಯವಕರಾನಿವ ಮನ್ಯೇ|
10 ೧೦ ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ.
ಯತೋ ಹೇತೋರಹಂ ಖ್ರೀಷ್ಟಂ ತಸ್ಯ ಪುನರುತ್ಥಿತೇ ರ್ಗುಣಂ ತಸ್ಯ ದುಃಖಾನಾಂ ಭಾಗಿತ್ವಞ್ಚ ಜ್ಞಾತ್ವಾ ತಸ್ಯ ಮೃತ್ಯೋರಾಕೃತಿಞ್ಚ ಗೃಹೀತ್ವಾ
11 ೧೧ ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.
ಯೇನ ಕೇನಚಿತ್ ಪ್ರಕಾರೇಣ ಮೃತಾನಾಂ ಪುನರುತ್ಥಿತಿಂ ಪ್ರಾಪ್ತುಂ ಯತೇ|
12 ೧೨ ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.
ಮಯಾ ತತ್ ಸರ್ವ್ವಮ್ ಅಧುನಾ ಪ್ರಾಪಿ ಸಿದ್ಧತಾ ವಾಲಮ್ಭಿ ತನ್ನಹಿ ಕಿನ್ತು ಯದರ್ಥಮ್ ಅಹಂ ಖ್ರೀಷ್ಟೇನ ಧಾರಿತಸ್ತದ್ ಧಾರಯಿತುಂ ಧಾವಾಮಿ|
13 ೧೩ ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ,
ಹೇ ಭ್ರಾತರಃ, ಮಯಾ ತದ್ ಧಾರಿತಮ್ ಇತಿ ನ ಮನ್ಯತೇ ಕಿನ್ತ್ವೇತದೈಕಮಾತ್ರಂ ವದಾಮಿ ಯಾನಿ ಪಶ್ಚಾತ್ ಸ್ಥಿತಾನಿ ತಾನಿ ವಿಸ್ಮೃತ್ಯಾಹಮ್ ಅಗ್ರಸ್ಥಿತಾನ್ಯುದ್ದಿಶ್ಯ
14 ೧೪ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ.
ಪೂರ್ಣಯತ್ನೇನ ಲಕ್ಷ್ಯಂ ಪ್ರತಿ ಧಾವನ್ ಖ್ರೀಷ್ಟಯೀಶುನೋರ್ದ್ಧ್ವಾತ್ ಮಾಮ್ ಆಹ್ವಯತ ಈಶ್ವರಾತ್ ಜೇತೃಪಣಂ ಪ್ರಾಪ್ತುಂ ಚೇಷ್ಟೇ|
15 ೧೫ ನಮ್ಮಲ್ಲಿ ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು.
ಅಸ್ಮಾಕಂ ಮಧ್ಯೇ ಯೇ ಸಿದ್ಧಾಸ್ತೈಃ ಸರ್ವ್ವೈಸ್ತದೇವ ಭಾವ್ಯತಾಂ, ಯದಿ ಚ ಕಞ್ಚನ ವಿಷಯಮ್ ಅಧಿ ಯುಷ್ಮಾಕಮ್ ಅಪರೋ ಭಾವೋ ಭವತಿ ತರ್ಹೀಶ್ವರಸ್ತಮಪಿ ಯುಷ್ಮಾಕಂ ಪ್ರತಿ ಪ್ರಕಾಶಯಿಷ್ಯತಿ|
16 ೧೬ ಅಂತೂ, ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.
ಕಿನ್ತು ವಯಂ ಯದ್ಯದ್ ಅವಗತಾ ಆಸ್ಮಸ್ತತ್ರಾಸ್ಮಾಭಿರೇಕೋ ವಿಧಿರಾಚರಿತವ್ಯ ಏಕಭಾವೈ ರ್ಭವಿತವ್ಯಞ್ಚ|
17 ೧೭ ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.
ಹೇ ಭ್ರಾತರಃ, ಯೂಯಂ ಮಮಾನುಗಾಮಿನೋ ಭವತ ವಯಞ್ಚ ಯಾದೃಗಾಚರಣಸ್ಯ ನಿದರ್ಶನಸ್ವರೂಪಾ ಭವಾಮಸ್ತಾದೃಗಾಚಾರಿಣೋ ಲೋಕಾನ್ ಆಲೋಕಯಧ್ವಂ|
18 ೧೮ ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.
ಯತೋಽನೇಕೇ ವಿಪಥೇ ಚರನ್ತಿ ತೇ ಚ ಖ್ರೀಷ್ಟಸ್ಯ ಕ್ರುಶಸ್ಯ ಶತ್ರವ ಇತಿ ಪುರಾ ಮಯಾ ಪುನಃ ಪುನಃ ಕಥಿತಮ್ ಅಧುನಾಪಿ ರುದತಾ ಮಯಾ ಕಥ್ಯತೇ|
19 ೧೯ ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.
ತೇಷಾಂ ಶೇಷದಶಾ ಸರ್ವ್ವನಾಶ ಉದರಶ್ಚೇಶ್ವರೋ ಲಜ್ಜಾ ಚ ಶ್ಲಾಘಾ ಪೃಥಿವ್ಯಾಞ್ಚ ಲಗ್ನಂ ಮನಃ|
20 ೨೦ ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ.
ಕಿನ್ತ್ವಸ್ಮಾಕಂ ಜನಪದಃ ಸ್ವರ್ಗೇ ವಿದ್ಯತೇ ತಸ್ಮಾಚ್ಚಾಗಮಿಷ್ಯನ್ತಂ ತ್ರಾತಾರಂ ಪ್ರಭುಂ ಯೀಶುಖ್ರೀಷ್ಟಂ ವಯಂ ಪ್ರತೀಕ್ಷಾಮಹೇ|
21 ೨೧ ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.
ಸ ಚ ಯಯಾ ಶಕ್ತ್ಯಾ ಸರ್ವ್ವಾಣ್ಯೇವ ಸ್ವಸ್ಯ ವಶೀಕರ್ತ್ತುಂ ಪಾರಯತಿ ತಯಾಸ್ಮಾಕಮ್ ಅಧಮಂ ಶರೀರಂ ರೂಪಾನ್ತರೀಕೃತ್ಯ ಸ್ವಕೀಯತೇಜೋಮಯಶರೀರಸ್ಯ ಸಮಾಕಾರಂ ಕರಿಷ್ಯತಿ|

< ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ 3 >