< ಕೀರ್ತನೆಗಳು 107 >

1 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.
O give praise to the Lord, for he is good: for his mercy is unchanging for ever.
2 ಯೆಹೋವನ ವಿಮುಕ್ತರು ಅಂದರೆ ಆತನು ಶತ್ರುಗಳಿಂದ ಬಿಡಿಸಿ,
Let those whose cause the Lord has taken up say so, his people whom he has taken out of the hands of their haters;
3 ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳಲ್ಲಿಯೂ, ಸಮುದ್ರದ ಕಡೆಯಲ್ಲಿಯೂ ಇರುವ ದೇಶಗಳಿಂದ ಕೂಡಿಸಿದವರೆಲ್ಲರೂ ಸ್ತುತಿಮಾಡಲಿ.
Making them come together out of all the lands, from the east and from the west, from the north and from the south.
4 ಅವರು ಅರಣ್ಯದಲ್ಲಿಯೂ, ಮರಳುಗಾಡಿನಲ್ಲಿಯೂ, ದಾರಿತಪ್ಪಿ ಅಲೆಯುವವರಾಗಿ, ಜನವಿರುವ ಊರನ್ನು ಕಾಣದೆ,
They were wandering in the waste places; they saw no way to a resting-place.
5 ಹಸಿವೆ, ನೀರಡಿಕೆಗಳಿಂದ ಬಲಗುಂದಿದವರಾಗಿದ್ದರು.
Their souls became feeble for need of food and drink.
6 ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಬಿಡಿಸಿದನು.
Then they sent up their cry to the Lord in their sorrow, and he gave them salvation out of all their troubles;
7 ಜನವಿರುವ ಊರನ್ನು ಸೇರುವಂತೆ, ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದನು.
Guiding them in the right way, so that they might come into the town of their resting-place.
8 ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.
Let men give praise to the Lord for his mercy, and for the wonders which he does for the children of men!
9 ಆತನು ಬಾಯಾರಿದವರ ಆಶೆಯನ್ನು ಪೂರೈಸಿ, ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ.
He gives its desire to the unresting soul, so that it is full of good things.
10 ೧೦ ಕತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ, ಬೇಡಿಗಳಿಂದ ಬಂಧಿಸಲ್ಪಟ್ಟು, ನೋವಿನಿಂದ ಬಿದ್ದುಕೊಂಡಿದ್ದರು.
Those who were in the dark, in the black night, in chains of sorrow and iron;
11 ೧೧ ಅವರು ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ನಿಂತು, ಪರಾತ್ಪರನಾದ ದೇವರ ಸಂಕಲ್ಪವನ್ನು ನಿರಾಕರಿಸಿದ್ದರಿಂದ,
Because they went against the words of God, and gave no thought to the laws of the Most High:
12 ೧೨ ಆತನು ಅವರನ್ನು ಕಷ್ಟಗಳಿಂದ ಕುಗ್ಗಿಸಿದನು; ನಿರಾಶ್ರಯರಾಗಿ ಬಿದ್ದುಹೋದರು.
So that he made their hearts weighted down with grief; they were falling, and had no helper.
13 ೧೩ ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.
Then they sent up their cry to the Lord in their sorrow, and he gave them salvation out of all their troubles.
14 ೧೪ ಆತನು ಅವರ ಬಂಧನಗಳನ್ನು ತೆಗೆದುಹಾಕಿ, ಕತ್ತಲೆಯಿಂದಲೂ, ಘೋರಾಂಧಕಾರದಿಂದಲೂ ಅವರನ್ನು ಹೊರತಂದನು.
He took them out of the dark and the black night, and all their chains were broken.
15 ೧೫ ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.
Let men give praise to the Lord for his mercy, and for the wonders which he does for the children of men!
16 ೧೬ ಆತನು ತಾಮ್ರದ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಟ್ಟಿದ್ದಾನೆ.
The doors of brass are broken by his arm, and the bands of iron are cut in two.
17 ೧೭ ಮೂರ್ಖರು ಅಪರಾಧ, ದುರಾಚಾರಗಳ ದೆಸೆಯಿಂದ ಬಾಧೆಗೊಳಗಾದರು.
Foolish men, because of their sins, and because of their wrongdoing, are troubled;
18 ೧೮ ಎಲ್ಲಾ ಆಹಾರಕ್ಕೂ ಅಸಹ್ಯಪಟ್ಟು ಮರಣದ್ವಾರಕ್ಕೆ ಸಮೀಪವಾದರು.
They are disgusted by all food, and they come near to the doors of death.
19 ೧೯ ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.
Then they send up their cry to the Lord in their sorrow, and he gives them salvation out of all their troubles.
20 ೨೦ ಆತನು ದೂತನನ್ನೋ ಎಂಬಂತೆ ತನ್ನ ವಾಕ್ಯವನ್ನು ಕಳುಹಿಸಿ, ಅವರನ್ನು ಗುಣಪಡಿಸಿದನು; ಸಮಾಧಿಗೆ ಸೇರದಂತೆ ಮಾಡಿದನು.
He sent his word and made them well, and kept them safe from the underworld.
21 ೨೧ ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.
Let men give praise to the Lord for his mercy, and for the wonders which he does for the children of men!
22 ೨೨ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸಿ, ಉತ್ಸಾಹಧ್ವನಿಮಾಡುತ್ತಾ ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ.
Let them make offerings of praise, giving news of his works with cries of joy.
23 ೨೩ ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು,
Those who go down to the sea in ships, who do business in the great waters;
24 ೨೪ ಯೆಹೋವನ ಮಹತ್ಕಾರ್ಯಗಳನ್ನೂ, ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.
They see the works of the Lord, and his wonders in the deep.
25 ೨೫ ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ, ಅದರಲ್ಲಿ ತೆರೆಗಳನ್ನು ಎಬ್ಬಿಸಿತು.
For at his word comes up the storm-wind, lifting high the waves.
26 ೨೬ ಜನರು ಆಕಾಶಕ್ಕೆ ಏರುತ್ತಲೂ, ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು.
The sailors go up to heaven, and down into the deep; their souls are wasted because of their trouble.
27 ೨೭ ಅವರು ದಿಕ್ಕುತೋರದವರಾಗಿ ಸುತ್ತುತ್ತಾ, ಕುಡುಕರಂತೆ ಹೊಯ್ದಾಡುತ್ತಿದ್ದರು.
They are turned here and there, rolling like a man who is full of wine; and all their wisdom comes to nothing.
28 ೨೮ ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಹೊರತಂದನು.
Then they send up their cry to the Lord in their sorrow, and he gives them salvation out of all their troubles.
29 ೨೯ ಆತನು ಬಿರುಗಾಳಿಯನ್ನು ಶಾಂತಪಡಿಸಿದನು; ತೆರೆಗಳು ನಿಂತವು.
He makes the storm into a calm, so that the waves are at peace.
30 ೩೦ ಸಮುದ್ರವು ಶಾಂತವಾದುದರಿಂದ, ಹಡಗಿನವರು ಸಂತೋಷಪಟ್ಟರು, ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು.
Then they are glad, because the sea is quiet, and he takes them to the harbour of their desire.
31 ೩೧ ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ.
Let men give praise to the Lord for his mercy, and for the wonders which he does for the children of men!
32 ೩೨ ನೆರೆದ ಸಭೆಯಲ್ಲಿ ಆತನನ್ನು ಕೀರ್ತಿಸಲಿ; ಹಿರಿಯರ ಸಮೂಹದಲ್ಲಿ ಕೊಂಡಾಡಲಿ.
Let them give glory to him in the meeting of the people, and praise among the chiefs.
33 ೩೩ ಆತನು ನಿವಾಸಿಗಳ ದುಷ್ಟತನಕ್ಕಾಗಿ ನದಿಗಳನ್ನು ಅರಣ್ಯವಾಗುವಂತೆಯೂ,
He makes rivers into waste places, and springs of water into a dry land;
34 ೩೪ ನೀರಿನ ಬುಗ್ಗೆಗಳನ್ನು ಒಣನೆಲವಾಗುವಂತೆಯೂ, ಫಲಭೂಮಿಯನ್ನು ಉಪ್ಪು ನೆಲವಾಗುವಂತೆಯೂ ಮಾಡಿದನು.
He makes a fertile country into a salt waste, because of the sins of those who are living there.
35 ೩೫ ಅರಣ್ಯವನ್ನು ಕೆರೆಯಾಗಿಯೂ, ಒಣನೆಲವನ್ನು ಬುಗ್ಗೆಗಳಾಗಿಯೂ ಮಾಡಿ,
He makes a waste land into a place of water, and a dry land into water-springs.
36 ೩೬ ಅಲ್ಲಿ ಹಸಿದವರನ್ನು ನೆಲೆಗೊಳಿಸಿದನು; ಅವರು ನೆಲೆಯಾಗಿ ವಾಸಿಸಲು ಪಟ್ಟಣವನ್ನು ಕಟ್ಟಿಕೊಂಡು,
And there he gives the poor a resting-place, so that they may make themselves a town;
37 ೩೭ ಹೊಲಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಟ್ಟು, ಆದಾಯವನ್ನು ಕೂಡಿಸಿಕೊಂಡರು.
And put seed in the fields and make vine-gardens, to give them fruit.
38 ೩೮ ಆತನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚಿದರು. ಅವರಿಗೆ ದನಕರುಗಳೇನೂ ಕಡಿಮೆ ಇರಲಿಲ್ಲ.
He gives them his blessing so that they are increased greatly, and their cattle do not become less.
39 ೩೯ ಅವರು ಕೇಡು ತೊಂದರೆಗಳಿಂದಲೂ, ಸಂಕಟದಿಂದಲೂ ಕುಗ್ಗಿಹೋಗಿ ಸ್ವಲ್ಪ ಜನರಾದರು.
And when they are made low, and crushed by trouble and sorrow,
40 ೪೦ ಪ್ರಭುಗಳಿಗೆ ಅಪಮಾನವನ್ನು ಉಂಟುಮಾಡಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವವನು.
He puts an end to the pride of kings, and sends them wandering in the waste lands where there is no way.
41 ೪೧ ಕಷ್ಟದಲ್ಲಿದ್ದ ದೀನರನ್ನು ಉನ್ನತಸ್ಥಿತಿಗೆ ಏರಿಸಿ, ಅವರ ಕುಟುಂಬಗಳನ್ನು ಕುರಿಹಿಂಡಿನಂತೆ ಹೆಚ್ಚಿಸಿದನು.
But he puts the poor man on high from his troubles, and gives him families like a flock.
42 ೪೨ ಯಥಾರ್ಥರು ಇದನ್ನು ನೋಡಿ ಹಿಗ್ಗುವರು; ಕೆಡುಕುಬಾಯಿ ಮುಚ್ಚಿಹೋಗುವುದು.
The upright see it and are glad: the mouth of the sinner is stopped.
43 ೪೩ ಜ್ಞಾನಿಗಳು ಈ ಸಂಗತಿಗಳನ್ನು ಗಮನಿಸಿ, ಯೆಹೋವನ ಕೃಪಾಕಾರ್ಯಗಳನ್ನು ಗ್ರಹಿಸಿಕೊಳ್ಳಲಿ.
Let the wise give thought to these things, and see the mercies of the Lord.

< ಕೀರ್ತನೆಗಳು 107 >