< ಯೂದನು ಬರೆದ ಪತ್ರಿಕೆ 1 >

1 ಕ್ರಿಸ್ತ ಯೇಸುವಿನ ದಾಸನೂ ಯಾಕೋಬನ ಸಹೋದರನೂ ಆಗಿರುವ ಯೂದನು, ತಂದೆಯಾದ ದೇವರಿಗೆ ಪ್ರಿಯರಾದವವರಿಗೂ ಕ್ರಿಸ್ತ ಯೇಸು ಸುರಕ್ಷತೆಯನ್ನೂ ಅವರ ಕರೆಯುವಿಕೆಯನ್ನೂ ಹೊಂದಿದವರಿಗೆ ಬರೆಯುವ ಪತ್ರ:
Neni Yuda, ntumintumi gwa Yesu Kristu na mlongu gwa Yakobu. Nankuwalembera mwenga yamushemitwi na Mlungu Tati, na yamfiruwa na Mlungu Tati na yamulikala mumafiliru gakuwi na kulolerwa weri kwajili ya Yesu Kristu.
2 ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
Lusungu na ponga na ufiru viweri vivuwa kwa mwenga.
3 ಪ್ರಿಯ ಸ್ನೇಹಿತರೇ, ನಾವು ಹಂಚಿಕೊಳ್ಳುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಜಾಗ್ರತೆಯಿಂದ ಪ್ರಯತ್ನ ಮಾಡುತ್ತಿದ್ದಾಗ, ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲಾದ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
Waganja wangu, neni nweriti na matamata ga kuwalembera kuusu ulopoziya ulii yatuwutenda pamuhera, kumbiti mona iherepa kuwalembera na kuwaluwa muyiteteyi kwa gangamala njimiru Mlungu yakawapananiti wantu wakuwi mala yimu hera kwa shipindi shoseri.
4 ಏಕೆಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆಪಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡೆಸುವವರೂ ನಮ್ಮ ಒಬ್ಬರೇ ಕರ್ತ ಆಗಿರುವ ದೇವರನ್ನು ಮತ್ತು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಲ್ಲಗಳೆಯುವ ಕೆಲವು ಜನರೂ ರಹಸ್ಯವಾಗಿ ಸಭೆಯೊಳಗೆ ಹೊಕ್ಕಿದ್ದಾರೆ. ಇವರು ದಂಡನೆಗೋಸ್ಕರ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ.
Toziya kwana wantu wamu yawaliyingiziyiti kwa bada pakati penu, wantu weni utoza wawu ulembitwi Mumalembu Mananagala kwanjira makashu, womberi wamjimiriti ndiri Mlungu na kumupanana ligoya, wantu yawagalambula ujumbi wa manemu ga Mlungu gwetu, su wapati kutenda undiyandiya na kumlema Yesu Kristu, yakawera Mkolamlima na Mtuwa gwetu gweka yakuwi.
5 ಇದನ್ನು ನೀವು ಈಗಾಗಲೇ ಒಂದು ಸಾರಿ ತಿಳಿದವರಾಗಿದ್ದೀರಿ. ಆದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವುದೆಂದರೆ: ಕರ್ತದೇವರು ತಮ್ಮ ಪ್ರಜೆಯನ್ನು ಈಜಿಪ್ಟ್ ದೇಶದೊಳಗಿಂದ ರಕ್ಷಿಸಿದರೂ ತರುವಾಯ ಅವರೊಳಗೆ ನಂಬದೆ ಹೋದವರನ್ನು ಸಂಹಾರ ಮಾಡಿದರು.
Tembera muvimaniti kala nakamu vitwatira vyoseri avi, vinu nfira kuwaholuziya kuwera Mtuwa pakawalopoziyiti wantu wakuwi kulawa Misri, shakapanu kawagamiziyiti walii yawalemiti kujimira.
6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ಅವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿಟ್ಟಿದ್ದಾರೆ. (aïdios g126)
Na wantumintumi wa kumpindi wasinditi kugoloka weri mumpenu zyawu zyawapananitwi, kumbiti wagalekiti makawu gawu weni, Mlungu kawatatiriti muluwindu dunu kwa minyololu ya mashaka goseri su watozwi mulishaka lilii likulu. (aïdios g126)
7 ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ. (aiōnios g166)
Muliholi viraa Sodoma na Gomora na lushi zya mumbwega mwakuwi, wenikaya wakuwi watenditi uhumba gambira wantumintumi wa kumpindi ntambu yawatenditi uhumba na vitwatira vya kugalambula nshimba ntambu yakanyawiti Mlungu, wapananitwi azabu mumotu gwa mashaka goseri, su liweri Libeliziwu kwa wantu woseri. (aiōnios g166)
8 ಹಾಗೆಯೇ ಈ ದುಃಸ್ವಪ್ನದವರೂ ಶರೀರವನ್ನು ಮಲಿನಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆಮಾಡುವವರೂ ದೇವದೂತರುಗಳನ್ನು ದೂಷಿಸುವವರೂ ಆಗಿದ್ದಾರೆ.
Ayi ndo ntambu yawawera wantu awa. Kulota kwawu kuwalonguziya kuzidodisiya nshimba zyawu weni, walema uwezu wa Mlungu na kuvihigilanga viwumbi vya kumpindi kwa Mlungu.
9 ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು, ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ, ಅವನು ಸೈತಾನನನ್ನು ದೂಷಿಸುವುದಕ್ಕೆ ಧೈರ್ಯಗೊಳ್ಳದೆ, “ಕರ್ತದೇವರು ನಿನ್ನನ್ನು ಗದರಿಸಲಿ!” ಎಂದನು.
Kumbiti ata Mikaeli ntumintumi mkulu gwa kumpindi, katenditi ndiri hangu, pakasinganiti na Mkondola kuusu nshimba ya Musa, Mikaeli kajeriti ndiri kumtoza Mkondola kwa mayigilangu, kumbiti kalongiti, “Mtuwa kakukalipiri.”
10 ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ. ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
Kumbiti wantu awa wavigilanga vintu vyawavimana ndiri. Kwana vitwatira vyawavimana na wavitenda pota kuvihola, gambira wankanyama ntambu yawatenda, toziya wankanyama wahera mahala, na vitwatira avi vyankuwahalabisiya wantu weni.
11 ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವುದಕ್ಕಾಗಿ ಬಿಳಾಮನ ದೋಷವನ್ನು ಮಾಡುವುದಕ್ಕೆ ದುರಾಶೆಯಿಂದ ಓಡುವವರಾಗಿದ್ದಾರೆ. ಅವರು ಕೋರಹನಂತೆ ಎದುರು ಮಾತನಾಡಿ ನಾಶವಾಗುವವರಾಗಿದ್ದಾರೆ. ಆದ್ದರಿಂದ ಅವರ ಗತಿ ಏನೆಂದು ಹೇಳಲಿ!
Shondi kwawu! Womberi yawagufata mgenderanu gulaa gulii gwa Kaini. Toziya ya mpiya, womberi watugiriti mota mulikosa lya Balamu na watenditi msindu gambira Kola na hawagamili gambira yomberi ntambu yakagamiriti.
12 ಕಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಚದುರಿ ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತು, ಹಣ್ಣು ಬಿಡದೆ ಒಣಗಿ ಹೋಗಿ ಬೇರುಸಹಿತ ಕಿತ್ತು ಬಿದ್ದ ಮರಗಳೂ
Awa ndo wantu yawatenda pamuhera na mwenga mushiboga shenu sha ufiru pota kuwona soni. Womberi wawera gambira matalawu ga hatali gagaweza kugwamiziya mtumbwi na waweriti gambira walolera yawaliliziya weni hera na waweriti gambira mawundu yagahera mashi yagalonguziwa kwa liyega na waweriti gambira mitera yahera mabwajubwaju mushipindi sha kubena, yayitupulitwi na kufuwa nakamu,
13 ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೆ ಇಡಲಾಗಿದೆ. (aiōn g165)
wantu awa wawera gambira makupala makulu ga bahali, na matendu gawu ga soni galawa gambira ufulufulu. Womberi wawera gambira ntondu zyazyagamila, zyeni zitulwa mashaka goseri muluwindu dunu. (aiōn g165)
14 ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ, “ಇಗೋ, ಕರ್ತದೇವರು ತಮ್ಮ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು
Na Henoki, muntu gwa shiyiwuku sha saba kwanjira Adamu, katungiti kala kuusu wantu awa pakalonga, “Guloli, Mtuwa kankwiza pamuhera na wantumintumi wakuwi wananagala wa kumpindi yaguweza ndiri kuwawalanga
15 ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು.
su kumtoza kila muntu yakamjimiriti ndiri Mlungu na kumupanana ligoya na kuwazibu wantu woseri yawalemiti kumjimira Mlungu na kumupanana ligoya toziya ya matendu gawu goseri madoda gawatenditi pota na kumshera Mlungu, na toziya ya visoweru vyoseri vyavikalaziya vyeni wantu yawatenda vidoda vyawamtakuliriti.”
16 ಇವರು ಗೊಣಗುಟ್ಟುವವರೂ ದೂರುವವರೂ ತಮ್ಮ ದುರಾಶೆಗಳನ್ನು ಅನುಸರಿಸಿ ನಡೆಯುವವರೂ ಆಗಿದ್ದಾರೆ. ಇವರ ಬಾಯಿಂದ ದೊಡ್ಡ ದೊಡ್ಡ ಮಾತುಗಳು ಉದುರುತ್ತವೆ. ಇವರು ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ.
Wantu awa ndo yawakukulika na yawalalamika na wafata matamata zyawu zidoda, walikoma shifuwa na kuwazyuma wantu wamonga toziya ya mota zyawu weni.
17 ಪ್ರಿಯ ಸ್ನೇಹಿತರೇ, ನೀವಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
Kumbiti mwenga waganja wangu, muliholi galii gamgambiritwi pamberi na wantumintumi wa Mtuwa gwetu Yesu Kristu.
18 “ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅಪೊಸ್ತಲರು ನಿಮಗೆ ಹೇಳಿದರು.
Wawagambiriti, “Mashaka ga upeleru hawalawili wantu yawamjimira ndiri Mlungu, wantu yawafata matamata zyawu zidoda, womberi hawawatenderi lidufiya.”
19 ಇವರು ನಿಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವವರೂ ಪ್ರಾಪಂಚಿಕ ಮನುಷ್ಯರೂ ಪವಿತ್ರಾತ್ಮ ದೇವರಿಲ್ಲದವರೂ ಆಗಿದ್ದಾರೆ.
Wantu awa ndo yawajega mabagulanu pakati penu, wantu wa maholu ga shipasipanu, wantu yawahera Rohu gwa Mlungu.
20 ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯಲ್ಲಿ ನಿಮ್ಮನ್ನು ನಿರ್ಮಿಸಿಕೊಂಡವರಾಗಿ ಪರಿಶುದ್ಧಾತ್ಮ ದೇವರಲ್ಲಿ ಪ್ರಾರ್ಥಿಸಿರಿ.
Kumbiti mwenga, waganja wangu, mulinyawi maweni gweka munjimiru yenu yayiwera nanagala nentu na muluwi Mlungu kwa makakala ga Rohu Mnanagala.
21 ನಿತ್ಯಜೀವಕ್ಕಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕರುಣೆಗೋಸ್ಕರ ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. (aiōnios g166)
Muliloleri weri muufiru wa Mlungu, pamuluhepa lusungu lwa Mtuwa gwetu Yesu Kristu, su kawajegi muwukomu wa mashaka goseri. (aiōnios g166)
22 ಸಂಶಯಪಡುವ ಕೆಲವರಿಗೆ ಕನಿಕರವನ್ನು ತೋರಿಸಿರಿ.
Muweri na lusungu kwa wantu woseri yawawera na lyoga,
23 ಬೇರೆಯವರನ್ನು ಬೆಂಕಿಯಿಂದ ಎಳೆದು ರಕ್ಷಿಸಿರಿ. ಭಯದಿಂದ ಕರುಣೆ ತೋರಿಸಿರಿ. ಪಾಪ ಕೃತ್ಯಗಳಿಂದ ಮೈಲಿಗೆಯಾದ ಅವರ ಜೀವನವನ್ನು ಸಹ ಹಗೆ ಮಾಡಿರಿ.
muwalopoziyi wamonga kwa kuwanyasula kulawa mumotu gwa utoza, kumbiti kwa wamonga muwawoneri lusungu pamuwera na lyoga, pamuzikalalira ata nguwu zawu zyazidodisiwitwi na madowa ga matamata zawu zidoda.
24 ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತಮ್ಮ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ಅತ್ಯಂತ ಹರ್ಷದೊಡನೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತರಾಗಿರುವ
Su yomberi kaweza kuwalolera weri su namguwa na kuwajega mwenga pota likosa mpaka kulongolu kwa ukwisa wakuwi na kwa nemeleru,
25 ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್. (aiōn g165)
kwa Mlungu gweka yakuwi na Mlopoziya gwetu, uweri ukwisa na ukulu na makakala na uwezu na ukolamlima kwa njira ya Kristu Yesu Mtuwa gwetu, kwanjira makashu pamberi pa kuwumbwa kwa pasipanu na vinu na ata mashaka goseri. Yina haa. (aiōn g165)

< ಯೂದನು ಬರೆದ ಪತ್ರಿಕೆ 1 >