< اشعیا 24 >

اینک خداوند زمین را خالی و ویران می کند، و آن را واژگون ساخته، ساکنانش را پراکنده می‌سازد. ۱ 1
ಇಗೋ, ಯೆಹೋವನು ಭೂಮಿಯನ್ನು ಬರಿದುಮಾಡಿ, ಎಲ್ಲಾ ಪ್ರದೇಶವನ್ನು ನಿರ್ಜನಮಾಡಿ, ಅದನ್ನು ವಿಕಾರಪಡಿಸಿ, ಅದರ ನಿವಾಸಿಗಳನ್ನು ಚದುರಿಸಿಬಿಡುವವನಾಗಿದ್ದಾನೆ.
و مثل قوم، مثل کاهن و مثل بنده، مثل آقایش و مثل کنیز، مثل خاتونش و مثل مشتری، مثل فروشنده و مثل قرض دهنده، مثل قرض گیرنده و مثل سودخوار، مثل سود دهنده خواهد بود. ۲ 2
ಪ್ರಜೆಗಳು ಯಾಜಕ, ದಾಸ ಯಜಮಾನ, ದಾಸಿ, ಯಜಮಾನಿ, ಕೊಳ್ಳುವವನು, ಮಾರುವವನು, ಸಾಲ ಕೊಡುವವನು ಸಾಲ ಪಡೆಯುವವನು, ಬಡ್ಡಿ ಪಡೆಯುವವನು ಬಡ್ಡಿ ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವುದು.
و زمین بالکل خالی و بالکل غارت خواهد شد زیرا خداوند این سخن را گفته است. ۳ 3
ಭೂಮಿಯು ಬಟ್ಟಬರಿದಾಗುವುದು, ಅದು ಸಂಪೂರ್ಣ ಸುಲಿಗೆಯಾಗುವುದು, ಯೆಹೋವನೇ ಇದನ್ನು ನುಡಿದಿದ್ದಾನೆ.
زمین ماتم می‌کند و پژمرده می‌شود. ربع مسکون کاهیده و پژمرده می‌گردد، شریفان اهل زمین کاهیده می‌شوند. ۴ 4
ಭೂಮಿಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿಹೋಗಿದೆ, ಲೋಕದ ಉನ್ನತರು ಕಂಗೆಟ್ಟಿದ್ದಾರೆ.
زمین زیرساکنانش ملوث می‌شود زیرا که از شرایع تجاوزنموده و فرایض را تبدیل کرده و عهد جاودانی راشکسته‌اند. ۵ 5
ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ನಿಯಮಗಳನ್ನು ಬದಲಾಯಿಸಿ, ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು.
بنابراین لعنت، جهان را فانی کرده است و ساکنانش سزا یافته‌اند لهذا ساکنان زمین سوخته شده‌اند و مردمان، بسیار کم باقی‌مانده‌اند. ۶ 6
ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.
شیره انگور ماتم می‌گیرد و مو کاهیده می‌گردد وتمامی شاددلان آه می‌کشند. ۷ 7
ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ.
شادمانی دفها تلف شده، آواز عشرت کنندگان باطل و شادمانی بربطها ساکت خواهد شد. ۸ 8
ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ.
شراب را با سرودهانخواهند آشامید و مسکرات برای نوشندگانش تلخ خواهد شد. ۹ 9
ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವುದು.
قریه خرابه منهدم می‌شود وهر خانه بسته می‌گردد که کسی داخل آن نتواندشد. ۱۰ 10
೧೦ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೋಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ.
غوغایی برای شراب در کوچه‌ها است. هرگونه شادمانی تاریک گردیده و سرور زمین رفع شده است. ۱۱ 11
೧೧ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಕೊನೆಗೊಂಡಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ.
ویرانی در شهر باقی است ودروازه هایش به هلاکت خرد شده است. ۱۲ 12
೧೨ಪಟ್ಟಣಗಳು ಹಾಳೂರಾಗಿ ಉಳಿದಿದೆ; ನಾಶವು ಹೆಬ್ಬಾಗಿಲಿಗೆ ಬಡಿದಿದೆ.
زیرا که در وسط زمین در میان قوم هایش چنین خواهدشد مثل تکانیدن زیتون و مانند خوشه هایی که بعد از چیدن انگور باقی می‌ماند. ۱۳ 13
೧೩ಎಣ್ಣೆಯ ಮರವನ್ನು ಕಡಿದ ಬಳಿಕ, ದ್ರಾಕ್ಷಿಯ ಸುಗ್ಗಿಯು ತೀರಿದ ನಂತರ ಉಳಿದ ಕಾಯಿಗಳ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಉಳಿದಿರುವುದು.
اینان آواز خود را بلند کرده، ترنم خواهندنمود و درباره کبریایی خداوند از دریا صداخواهند زد. ۱۴ 14
೧೪ಅವರು ತಮ್ಮ ಧ್ವನಿ ಎತ್ತಿ ಯೆಹೋವನ ಮಹಿಮೆಯನ್ನು ಕುರಿತು ಹಾಡುವರು. ಸಮುದ್ರದ ಕಡೆಯಿಂದ ಆರ್ಭಟಿಸುವರು.
از این جهت خداوند را در بلادمشرق و نام یهوه خدای اسرائیل را درجزیره های دریا تمجید نمایید. ۱۵ 15
೧೫ಮೂಡಣದವರೇ, “ಯೆಹೋವನನ್ನು ಸನ್ಮಾನಿಸಿರಿ. ದ್ವೀಪ ನಿವಾಸಿಗಳೇ, ಇಸ್ರಾಯೇಲರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ” ಎಂದು ಕೂಗುವರು.
از کرانهای زمین سرودها را شنیدیم که عادلان را جلال باد. اما گفتم: وا حسرتا، وا حسرتا، وای بر من! خیانت کاران خیانت ورزیده، خیانت کاران به شدت خیانت ورزیده‌اند. ۱۶ 16
೧೬ಭೂಮಂಡಲದ ಕಟ್ಟಕಡೆಯಿಂದ, “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿ ಬಂದಿವೆ, ಆದರೆ “ನಾನಾದರೋ ಕ್ಷಯಿಸಿ ಹೋಗಿದ್ದೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ” ಎಂದುಕೊಂಡೆನು.
‌ای ساکن زمین ترس و حفره و دام بر تو است. ۱۷ 17
೧೭ಭೂನಿವಾಸಿಗಳೇ, ಭಯವೂ, ಗುಂಡಿಯೂ, ಬಲೆಯೂ ನಿಮಗೆ ಕಾದಿವೆ.
و واقع خواهد شد که هرکه از آواز ترس بگریزد به حفره خواهد افتاد وهر‌که از میان حفره برآید گرفتار دام خواهد شدزیرا که روزنه های علیین باز شده و اساسهای زمین متزلزل می‌باشد. ۱۸ 18
೧೮ಭಯದ ಸಪ್ಪಳದಿಂದ ಓಡಿ ಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿ ಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
زمین بالکل منکسرشده. زمین تمام از هم پاشیده و زمین به شدت متحرک گشته است. ۱۹ 19
೧೯ಭೂಮಿಯು ಒಡೆದೇ ಇದೆ, ಬಿರಿದಿದೆ, ಕದಲಿಯೇ ಹೋಗಿದೆ.
زمین مثل مستان افتان وخیزان است و مثل سایه بان به چپ و راست متحرک و گناهش بر آن سنگین است. پس افتاده است که بار دیگر نخواهد برخاست. ۲۰ 20
೨೦ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಗುಡಿಸಲಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರುಗಿ ಏಳುವುದೇ ಇಲ್ಲ.
و در آن روز واقع خواهد شد که خداوندگروه شریفان را بر مکان بلند ایشان و پادشاهان زمین را بر زمین سزا خواهد داد. ۲۱ 21
೨೧ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ, ಭೂಮಂಡಲದ ಒಡೆಯರನ್ನೂ ದಂಡಿಸುವನು.
و ایشان مثل اسیران در چاه جمع خواهند شد و درزندان بسته خواهند گردید و بعد از روزهای بسیار، ایشان طلبیده خواهند شد. ۲۲ 22
೨೨ಅವರು ಕೈದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಲ್ಪಟ್ಟು ಅದರಲ್ಲಿ ಮುಚ್ಚಲ್ಪಡುವರು. ಬಹಳ ದಿನಗಳ ನಂತರ ದಂಡನೆಗೆ ಗುರಿಯಾಗುವರು.
و ماه خجل و آفتاب رسوا خواهد گشت زیرا که یهوه صبایوت در کوه صهیون و در اورشلیم و به حضور مشایخ خویش، با جلال سلطنت خواهدنمود. ۲۳ 23
೨೩ಆಮೇಲೆ ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್ ಪರ್ವತದಲ್ಲಿ ಯೆರೂಸಲೇಮನ್ನು ಆಳುವನು. ಆತನ ಪರಿವಾರದ ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವುದು.

< اشعیا 24 >